ಭೂಸಮುಖ - 
	ಭೂವೈe್ಞÁನಿಕಕಾಲದ ಬೃಹದಂಶವೊಂದರ ಅವಧಿಯ ಕೆಳಮುಖ ಭೂನಿಮ್ನೋನತಕ್ಕೆ (ಜಿಯೊವಾರ್ಪಿಂಗ್) ಒಳಗಾಗಿರುವ ಭೂತೊಗಟೆಯ ಭಾಗ (ಜಿಯೊಸಿನ್‍ಕ್ಲೈನ್). ಇದು ಭೂತೊಗಟೆಯಲ್ಲಿ ರಚಿತವಾಗಿರುವ ಬಲು ದೊಡ್ಡ ಮತ್ತು ದೀರ್ಘವಾದ ಏಕಕೇಂದ್ರಾವನತ ಮಡಿಕೆ. ಇದೊಂದು ವಿಶಾಲ ನಿಕ್ಷೇಪಪ್ರದೇಶವೂ ಹೌದು. ಹಲವಾರು ಚದರಕಿಲೋಮೀಟರುಗಳ ವಿಸ್ತೀರ್ಣವುಳ್ಳದ್ದು. ಇದರಲ್ಲಿ ಸಂಗ್ರಹಗೊಂಡಿರುವ ಸ್ತರಗಳು 9144 ರಿಂದ 12192ಮೀಟರ್ ದಪ್ಪವಿರುತ್ತವೆ.

	ಭೂಖಂಡಗಳ ಮೇಲ್ಭಾಗದಲ್ಲಿ ನಿರಂತರವಾಗಿ ನಡೆದು ಬಂದಿರುವ ನಗ್ನೀಕರಣ ಕ್ರಿಯೆಯಿಂದ (ಅಥವಾ ಸವೆತದಿಂದ) ಶಿಥಿಲಗೊಂಡು ನಾಶವಾದ ಶಿಲಾಸಾಮಗ್ರಿ ಇತ್ಯಾದಿಗಳನ್ನು ಭೂವ್ಯಾಪಾರಕಾರಗಳು ಸಾಗಿಸಿ, ಅಂತಿಮವಾಗಿ ಅವನ್ನು ತೆಟ್ಟೆ ನೀರಿರುವ ಪ್ರದೇಶದೊಳಕ್ಕೆ ತಂದು ತುಂಬುತ್ತವೆ. ಈ ಪ್ರಕ್ರಿಯೆ ಭೂ ಚರಿತ್ರೆಯಲ್ಲಿ ಬಲು ದೀರ್ಘಕಾಲದ ತನಕವೂ ಮುಂದುವರಿಯುತ್ತದೆ. ಮೇಲಿಂದ ಮೇಲೆ ಎಡೆ ಬಿಡದೆ ಸಂಗ್ರಹವಾಗುವ ಮಡ್ಡಿ ಅಥವಾ ಚರಟಗಳ ಅತಿಭಾರದಿಂದ ಅಲ್ಲಿಯ ನಿಕ್ಷೇಪ ಪ್ರದೇಶದ ತಳಭಾಗ ದೀರ್ಘಾವಧಿಯಲ್ಲಿ ಕ್ರಮೇಣ ಕುಸಿಯುತ್ತದೆ. ಇಂಥ ಸಂದರ್ಭಗಳಲ್ಲಿ ಆ ಸ್ಥಳದಲ್ಲಿ ಭೂಸಮುಖ ಅಸ್ತಿತ್ವಕ್ಕೆ ಬರುತ್ತದೆ. ಕಾಲಕ್ರಮೇಣ ಅಲ್ಲಿ ಸಂಗ್ರಹವಾದ ಮಡ್ಡಿ ಅಥವಾ ಚರಟಗಳು ಒಂದುಗೂಡಿ ಸ್ತರಗಳ ರಚನೆಯಾಗುತ್ತದೆ. ಸಾಮಾನ್ಯವಾಗಿ ಭೂಸಮುಖ ಅಸ್ತಿತ್ವಕ್ಕೆ ಬರುವುದು ಎರಡು ಸ್ಥಿರ ಭೂಭಾಗಗಳ ಇಲ್ಲವೆ ಎರಡು ಸಮತಟ್ಟಾದ ಎತ್ತರ ಭೂಭಾಗಗಳ ನಡುವೆ. ಭೂಸಮುಖದಲ್ಲಿ ಸಂಗ್ರಹವಾದ ಭೂರಿಗಾತ್ರದ ಸಂಸ್ತರಗಳು, ಭೂಗರ್ಭದದಿಂದ ಉಂಟಾಗುವ ಅಧಿಕ ಒತ್ತಡಗಳಿಂದ ಮಣಿದು ಹಿಸುಕಲ್ಪಡುತ್ತವೆ. ಇದರಿಂದ ಅವು ಮಡಿಕೆಪರ್ವತಗಳಾಗೂ ರೂಪುಗೊಳ್ಳುತ್ತವೆ. ಉದಾಹರಣೆಗೆ ಟೆತಿಸ್ ಸಮುದ್ರದಿಂದ ಉಗಮಗೊಂಡ (ಮೇಲಕ್ಕೆ ಎತ್ತಲ್ಪಟ್ಟ) ಅತ್ಯಂತ ಎತ್ತರವೂ ರಮ್ಯವೂ ಆದ ಹಿಮಾಲಯ ಪರ್ವತಗಳು. ಈ ಕಾರಣ ಭೂಸಮುಖಗಳನ್ನು ಪರ್ವತಗಳ ಉಗಮಸ್ಥಾನಗಳೆಂದು ಹೇಳಲಾಗಿದೆ. ಭೂಸಮುಖದಲ್ಲಿರುವ ಮಡ್ಡಿ ಸಂಸ್ತರಗಳ ಜೊತೆಯಲ್ಲಿ ಅಗ್ನಿಶಿಲೆಗಳೂ ಸಾಮಾನ್ಯವಾಗಿ ಕಂಡುಬರುತ್ತವೆ.

	ಭೂಸಮುಖಗಳ ಪರಿಕಲ್ಪನೆಯನ್ನು ಮಂಡಿಸಿದವರು ಹಾಲ್ ಮತ್ತು ಡಾನಿ ಎಂಬ ಭೂವಿe್ಞÁನಿಗಳು. ಇವುಗಳ ಉಗಮ ಕುರಿತು ಹಾಗ್ ಎಂಬಾತ ತನ್ನ ಸಿದ್ಧಾಂತವನ್ನು ಪ್ರತಿಪಾದಿಸಿ ಭೂಚರಿತ್ರೆಯನ್ನೂ ನಿರೂಪಿಸುವ ಪ್ರಾಚೀನ ಭೌಗೋಳಿಕ ನಕ್ಷೆಗಳನ್ನು ರಚಿಸಿದ. ಇವುಗಳಲ್ಲಿ ಉದ್ದನೆಯ ಕಿರಿದಾದ ಸಾಗರಭಾಗಗಳನ್ನು ನಮೂದಿಸಲಾಗಿದೆ. ಪ್ರಸ್ತುತ ಈ ಭಾಗಗಳು ಭೂಮಿಯ ಮೇಲೆ ಚಾಚಿ ನಿಂತ ಉತ್ತುಂಗ ಪರ್ವತಶ್ರೇಣಿಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಅವರು ನಿರೂಪಿಸಿದರು. ಶ್ಚ್ಯೂಚರ್ಟ್ ಎಂಬ ವಿe್ಞÁನಿ ಭೂಸಮುಖಗಳನ್ನು ಮಾನೋ ಭೂಸಮುಖಗಳು, ಪಾಲಿ ಭೂಸಮುಖಗಳು, ಮೀಸೋ ಭೂಸಮುಖಗಳು ಎಂದು ಮೂರು ವಿಧಗಳಾಗಿ ವರ್ಗೀಕರಿಸಿದ್ದಾನೆ.	    					
(ಎಂ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ